Sunday, 3 May 2015

POEM - 9 - ಆಗಬಾರದಿತ್ತೇ ಇನ್ನೋರ್ವ ಹೆಲೆನ್ ಕೆಲರ್?

ಆಗಬಾರದಿತ್ತೇ ಇನ್ನೋರ್ವ ಹೆಲೆನ್ ಕೆಲರ್?

ಅರಳುವ ಮುನ್ನವೇ ಬಾಡಿಹೋಯಿತೇ,
ಮುದುಡಿಹೋಯಿತೆ ಹೂವ?
ಸುತ್ತಲಿನ ಜನರ ಮೆಚ್ಚಿಸದಾಯಿತೇ,
ಸೋತುಹೋಯಿತೇ ಭಾವ?
ಕುಂಟಿಯೆಂಬ ಬಿರುದ ಸಹಿಸದಾಯಿತೇ,
ಎದುರಿಸದಾಯಿತೇ ಜಗವ?
ಅಗ್ನಿಪರ್ವತದಂತೆ ಹುದುಗಿಸಿಕೊಂಡಿತ್ತೇ,
ಅವಮಾನದ ಬೆಂಕಿಯ ಲಾವ?
ಚುಚ್ಚುಮಾತುಗಳಿಂದ ಬಾಳದಾಯಿತೇ,
ಶರಣಾಯ್ತೇ ಸಾವಿಗೆ ಜೀವ?
ಬದುಕಬಾರದಿತ್ತೇ? ಆಗಬಾರದಿತ್ತೇ
ಇನ್ನೋರ್ವ ಹೆಲೆನ್ ಕೆಲರ್?
ಸಾಧಿಸಬಾರದಿತ್ತೇತೋರಬಾರದಿತ್ತೇ,

ತನ್ನಾತ್ಮವಿಶ್ವಾಸದ ಪವರ್?

No comments:

Post a Comment