Sunday, 3 May 2015

POEM - 18 - ಸಾಹಸ

ಸಾಹಸ

ಬೇಡುವವರಿಗೆ
ಆಯ್ಕೆಯ ಹಕ್ಕಿದೆಯೇ?
ಗೊತ್ತಿದ್ದೂ ಕೇಳಿ
ಇಲ್ಲವೆಂದಾಗ
ನೋವ ಪಡುವುದೇಕೆ?
ಕೇಳಿದಾಗ, ಸಿಗದಾಗ
ಅಳುವುದೇಕೆ?
ನನಗೆ ಹೀಗೇಕೆಂದು
ಗೋಳಾಡುವುದೇಕೆ?
ಜೀವನದಲಿ ಬರುವವು
ನಿರಾಶೆಗಳನೇಕ
ಬಾಳಿನಲಿ ಬರುವವು
ತಿರಸ್ಕಾರಗಳನೇಕ,
ನಿರಾಕರಣೆಗಳೆಲ್ಲವನು
ಸಹಿಸಿ ಸಾಗುವ ಛಲವಿರಬೇಕು
ಮರೆತು ನಿರಾಶೆಗಳನು
ಮುನ್ನಡೆಯುವ ಧೃತಿಯಿರಬೇಕು
ಅಳುವ ನುಂಗಿ ಹೊತ್ತು ನಗುವನು

ಬಾಳುವ ಸಾಹಸವು ಬೇಕು.

No comments:

Post a Comment