ಬೆರೆಯಲಾರೆವೆ ಮತ್ತೆ
ಕಳೆದುಕೊಂಡ ನಮ್ಮೆಲ್ಲಾ
ಸಂಬಂಧಗಳು
ಮತ್ತೆ ದೊರೆತರೆ
ಅದೆಷ್ಟು ಖುಷಿ?
ನಮ್ಮನ್ನಗಲಿ ದೂರ
ಹೋಗಿರುವವರ
ಸೇರಲಾರೆವು,
ಆದರೆ ನಮ್ಮನ್ನು
ಬಿಟ್ಟು ಹೋಗಿರುವವರ
ಸೇರಲಾರೆವೇ?
ಮನಸ್ತಾಪಗಳಿದ್ದಿರಬಹುದು
ಭಿನ್ನಾಭಿಪ್ರಾಯಗಳಿರಬಹುದು,
ಇರಬಹುದು ಮುನಿಸುಗಳು,
ಇರಬಹುದು ದುಮ್ಮಾನಗಳು,
ಸರಿಸಿದರೆಲ್ಲ ಒಂದು
ಕ್ಷಣ
ಮರೆತರೆ ಅಹಂ ಒಂದು
ಕ್ಷಣ
ಆಗಲಾರೆವೇ ಒಂದು
ಬೆರೆಯಲಾರೆವೇ ಇಂದು?
No comments:
Post a Comment