Sunday, 3 May 2015

POEM 25 - ಹೀಗೇಕೆ ಇರಬಾರದು?

ಹೀಗೇಕೆ ಇರಬಾರದು?

ಅವರನ್ನು ಕಂಡಾಗ
ಅಮ್ಮ ಮಗಳೆನಿಸಲಿಲ್ಲ.
ವಯಸ್ಸಿನ ಅಂತರದಿಂದಲ್ಲ,
ನೋಡಲೇನೊ
ಹೋಲಿಕೆಯಿತ್ತು,
ಆದರೆ ನಡೆನುಡಿ?
ಆತ್ಮೀಯ ಗೆಳತಿಯರಂತಿದ್ದರು.
ತನ್ನ ಮನದ ಭಾವನೆಗಳ,
ಪ್ರಶ್ನೆಗಳ ಸುರಿಯುತಿದ್ದಳು ಮಗಳು,
ಬೇಸರಿಸದೆ ರೇಗದೆ ಉತ್ತರಿಸುತಿದ್ದಳು
ತಾಯಿ.
ಯಾವುದೇ ನಿರ್ಬಂಧವಿಲ್ಲದೆ
ನಡೆದಿತ್ತಲ್ಲಿ ಮುಕ್ತ ಚರ್ಚೆ,
ಅವರ ನಡುವೆ.
ಕಂಪ್ಯೂಟರ್ ಬಗ್ಗೆ,
ವಾಟ್ಸ್ ಅಪ್ ಬಗ್ಗೆ
ತಾಯಿಗೆ ತಿಳಿಹೇಳುತ್ತಿದ್ದಳು ಪೋರಿ.
ಐಸ್ ಕ್ರೋಮ್ ತಿನ್ನುತ್ತಾ
ಅಮ್ಮನಿಗೂ ತಿನಿಸುತ್ತಾ
ನಡೆದಿದ್ದಳು ಮಗಳು.
ಇಬ್ಬರ ನಡುವೆ ಮುಚ್ಚುಮರೆಯಿರಲಿಲ್ಲ
ಹಾಗೆಂದು
ಒಬ್ಬರ ಸ್ವಾತಂತ್ರ್ಯಕ್ಕೆ
ಇನ್ನೊಬ್ಬರ ಅಡ್ಡಿಯಿರಲಿಲ್ಲ.
ನಗುತ್ತಾ ಸಾಗುತಿದ್ದ
ಜೋಡಿಯ ಕಂಡು
ಮೂಡಿತೊಂದು ಪ್ರಶ್ನೆಯು,
ಇರಬಾರದೇಕೆ ಎಲ್ಲಾ
ತಾಯಿಮಗಳು

ರೀತಿ ಜೊತೆಯಾಗಿಯೇ?

No comments:

Post a Comment