Sunday, 3 May 2015

POEM 24 - ಅಪ್ಪನಿಗೊಂದು ಪ್ರಶ್ನೆ

ಅಪ್ಪನಿಗೊಂದು ಪ್ರಶ್ನೆ 

ಅಪ್ಪ ನಿನಗೇಕೆ
ನಾನರ್ಥವಾಗುತ್ತಿಲ್ಲ?
ಇಷ್ಟೊಂದು ಅನುಮಾನವೇಕೆ?
ತಿಳಿಯದಾ ನಿನಗೆ
ನಾ ಅಮ್ಮನಿಂದ ಏನನ್ನೂ
ಮುಚ್ಚಿಡುವುದಿಲ್ಲವೆಂದು?
ನನ್ನ ನಡೆನುಡಿಯಲ್ಲಿ
ಮುಚ್ಚುಮರೆಯಿಲ್ಲ,
ನನ್ನ ಆಲೋಚನೆಯು
ದಿಕ್ಕು ತಪ್ಪುವುದಿಲ್ಲ.
ಹೊರಗಿನ ಪ್ರಪಂಚ
ಕ್ರೂರ ನಿಜ,
ಆದರೆ ಅದಕಾಗಿ
ನನ್ನ ಸ್ವಂತಿಕೆಯ ಹರಣವೇ?
ನಿನ್ನ ಕಾಳಜಿ
ನನಗರ್ಥವಾಗುವುದಿಲ್ಲವೆಂದಲ್ಲ,
ಆದರೆ ಇಷ್ಟೊಂದು?
ಉಸಿರುಗಟ್ಟಿಸುತ್ತದಲ್ಲ!
ಯಾರೋ ಮಾಡಿದ ತಪ್ಪಿಗೆ
ನಾನೇಕೆ ಬಲಿಯಾಗಬೇಕು?
ಯಾರದೋ ಸ್ವೇಚ್ಛಾಚಾರಕ್ಕೆ
ನನ್ನ ಸ್ವಾತಂತ್ರ್ಯ ಹರಣವಾಗಬೇಕೇ?
ಬಿಡು ನನ್ನ, ನಿರ್ಭಿಢೆಯಿಂದ,
ನೀ ತಲೆತಗ್ಗಿಸುವ ಕೆಲಸ
ನಡೆಯುವುದಿಲ್ಲ ನನ್ನಿಂದ.

No comments:

Post a Comment