Sunday, 3 May 2015

POEM 36 - ಜಾತಿಯ ವ್ಯಾಮೋಹವೇಕೆ ?

ಜಾತಿಯ ವ್ಯಾಮೋಹವೇಕೆ ?

ಮನೆಯೊಳಗೆ
ಬರುತ್ತಿದ್ದಂತೆ ಕಾಣುವ
ಬಸವಣ್ಣನ ಫೋಟೊ,
ಗೋಡೆಯ ಮೇಲಿನ
ಕ್ರಿಸ್ತನ ಶಿಲುಬೆ,
ಶೋಕೇಸ್ ನಲ್ಲಿರುವ
ಧ್ಯಾನಮಗ್ನ ಬುದ್ಧ,
ಬೀರುವಿಗೆ ಅಂಟಿಸಿದ
ಜ್ಯೋತಿಭಾ ಫುಲೆ ಫೋಟೊ,
ಇವುಗಳಲ್ಲಿ ಜಾತಿಯನು
ಹುಡುಕುವ ಯತ್ನವೇಕೆ?
ವಿವೇಕಾನಂದ, ರಾಮ್ ಮೋಹನ್
ಗಾಂಧೀಜಿ, ಗಫಾರ್ ಖಾನ್,
ವಿದ್ಯಾಸಾಗರ, ಸುಭಾಷ್ ಬೋಸ್
ಮೈಕೆಲ್ ದತ್, ಜತೀನ್ ದಾಸ್
ಭಗತ್ ಸಿಂಗ್ಕಿಟೆಲ್
ಡೆರೋಜಿಯೊ, ಬಿಸ್ಮಿಲ್
ಅಶ್ಫಾಕುಲ್ಲಾ, ದುರ್ಗಾ ಭಾಭಿ
ಚೆನ್ನಮ್ಮ, ಲಕ್ಷ್ಮಿಬಾಯಿ,
ಹುಟ್ಟಿದ ಮನೆಗಳು ಬೇರೆ
ಆದರೂ ಜಗದ್ವಂದ್ಯರೆ.
ಹುಟ್ಟಿನಿಂದ ಮಹಾನತೆ
ದೊರೆಯದ ಮೇಲೆ,
ಹುಟ್ಟಿನ ಮೇಲಿಷ್ಟು

ವ್ಯಾಮೋಹವೇಕೆ?

No comments:

Post a Comment