Sunday, 3 May 2015

POEM 38 - ಸೌಂದರ್ಯ

ಸೌಂದರ್ಯ

ಹೇಗಿದ್ದರೂ ಕಷ್ಟ ನಾವು,
ಆಡಿಕೊಳುವ ಜನರಿಗೆ!!
ಬೆಳ್ಳಗಿದ್ದರೂ, ಕಪ್ಪಗಿದ್ದರೂ
ಕುಳ್ಳಗಿದ್ದರೂ, ಉದ್ದಗಿದ್ದರೂ
ಸಣ್ಣಗಿದ್ದರೂ, ದಪ್ಪಗಿದ್ದರೂ,
ನಾವ್ ಹೇಗೆ ಇದ್ದರೂ
ಗೋಳಾಡಿಸುವ ಜನರ
ಬಾಯ್ಮುಚ್ಚಿಸುವುದು ಕಷ್ಟ.
ಬೆಳ್ಳಗಿದ್ದರೆ ಬಿಳಿ ಜಿರಲೆಯೆಂದು
ಕಪ್ಪಗಿದ್ದರೆ ಮಸಿ ಕುಡಿಕೆ ಎಂದು
ಸಣ್ಣಗಿದ್ದರೆ ಅಸ್ಥಿಪಂಜರವೆಂದು
ದಪ್ಪಗಿದ್ದರೆ ಡ್ರಮ್ ಎಂದು
ಉದ್ದಗಿದ್ದರೆ ತೆಂಗಿನಮರವೆಂದು
ಗಿಡ್ಡಕಿದ್ದರೆ ಕುಬ್ಜರು ಎಂದು
ಹೀಗೆ ಎಲ್ಲದಕ್ಕೂ
ಏನಾದರೊಂದು
ಹೆಸರನಿಟ್ಟು ನೋಯಿಸುವ
ಜನರೆಲ್ಲೆಡೆ ಇಹರೆಂದು,
ಸೌಂದರ್ಯ ಆಂತರ್ಯದಲಿ ಹೊರಗಲ್ಲವೆಂದು,
ಅರಿತು ನಾವು ಅವರ
ಪಕ್ಕಕ್ಕೆ ಸರಿಸಿದರಿಂದು,
ನೆಮ್ಮದಿಯಾಗಿ ಬಾಳುವೆವು,

ಇಂದು, ಮುಂದು, ಎಂದೆಂದೂ.

No comments:

Post a Comment