ತಾಯಿ
ಕಂದ ಮೊಲೆ ಕಚ್ಚುವುದೆಂದು
ಹಾಲು ಕುಡಿಸುವುದ ಬಿಟ್ಟಾಳ
ತಾಯಿ?
ಕೈ ನೋಯುವುದೆಂದು
ಹೆಗಲಿಗೇರಿಸಿ ಲಾಲಿಸುವುದ
ಬಿಟ್ಟಾಳ
ತಾಯಿ?
ಕಾಲುಗಳು ಸೋಲುವುದೆಂದು
ಓಡಾಡಿಸಿ ತಿನಿಸುವುದ ಬಿಟ್ಟಾಳ
ತಾಯಿ?
ಕೇಳಿದ್ದೆ ಕೇಳಲು ಬೇಸರವೆಂದು
ಮಾತ ಕಲಿಸುವುದ ಬಿಟ್ಟಾಳ
ತಾಯಿ?
ಹಾಗಿದ್ದರೆ
ಮಗನಿಗೆ ನೋವಾಗುವುದೆಂದು
ತಪ್ಪು ತಿದ್ದದಿದ್ದರೆ, ಹೇಗಾಗುವಳು
ತಾಯಿ?
No comments:
Post a Comment