Sunday, 3 May 2015

POEM 33 - ಮತ್ತೆ ಬರುವೆವು ನಾವು

ಮತ್ತೆ ಬರುವೆವು ನಾವು 

ಹೂಳಲೆತ್ನಿಸಿದರು
ನಮ್ಮನ್ನವರು,
ತಿಳಿಯಲಿಲ್ಲವರಿಗೆ
ನಾವು ಬೀಜಗಳೆಂದು,
ಚಿಗುರೊಡೆಯುತ್ತೇವೆಂದು.
ತುಳಿಯಲೆತ್ನಿಸಿದರು
ನಮ್ಮನ್ನವರು
ಅರಿವಾಗಲಿಲ್ಲವರಿಗೆ
ನಾವು ಜೇಡಿ ಮಣ್ಣೆಂದು,
ಹದವಾಗಿ, ಆಕಾರ ತಾಳುತ್ತೇವೆಂದು.
ಛಿದ್ರಗೊಳಿಸಲೆತ್ನಿಸಿದರು
ನಮ್ಮನ್ನವರು,
ಗೊತ್ತಾಗಲಿಲ್ಲವರಿಗೆ
ನಾವು ಜೀವಕೋಶಗಳೆಂದು,
ಒಡೆದು ದ್ವಿಗುಣಗೊಳ್ಳುತ್ತೇವೆಂದು.

No comments:

Post a Comment