Sunday, 3 May 2015

POEM - 11 - ಬೆಳಕನೀಯು ಬಾ

ಬೆಳಕನೀಯು ಬಾ

ಬೆಳಕನೀಯು ಬಾ
ಮರೀಚಿಕೆಯಂತೆ
ಭ್ರಮೆಯನು ಹುಟ್ಟಿಸಿ
ಮರೆಯಾಗಬೇಡ ನೀ
ಓಯಸಿಸ್ ನಂತೆ
ಮರಳುಗಾಡಿನಲಿ
ಜೊತೆಯಾಗಿ ಬಾ.
ಕಾಮನಬಿಲ್ಲಿನಂತೆ
ಕ್ಷಣಭಂಗುರ ಕನಸ ಹುಟ್ಟಿಸಿ
ಕಣ್ಮರೆಯಾಗಬೇಡ ನೀ
ರವಿಕಿರಣದಂತೆ
ಜೀವನದಲಿ
ಬೆಳಕನೀಯು ಬಾ.
ಬೇಸಿಗೆಯ ಹನಿಗಳಂತೆ
ತಂಪಿನ ಆಸೆಯ ಹುಟ್ಟಿಸಿ
ಕಾಣಿಯಾಗಬೇಡ ನೀ,
ಧಾರಕಾರ ಮಳೆಯಂತೆ
ಬೆಂಗಾಡಿನಲಿ

ಹಸಿರ ಚಿಗುರಿಸು ಬಾ.

No comments:

Post a Comment