ಬಾ ಕಂದ
ಬಂದುಬಿಡು ಕಂದ
ಇಷ್ಟೊಂದು ತಡವೇಕೆ?
ಕಾಯುತ್ತಿರುವೆ ನಾ
ತವಕದಿಂದ.
ಹೋಗಿರುವುದು
ಎರಡೇ ದಿನ
ಆದರನಿಸುತ್ತಿದೆ
ಎಷ್ಟೋ ಕಾಲವೆಂದು,
ನಿನ್ನ ನಗು, ಹರಟೆ
ತುಂಟಾಟ, ತಲೆಹರಟೆ
ಎಲ್ಲವೂ ಕಾಣಿ ಇಲ್ಲಿ
ಮನೆಯಲ್ಲಿ ನಿಶ್ಯಬ್ದ
ಮನದಲ್ಲಿ ನೀರವ ಮೌನ
ತಡೆಯಲಾರೆ ನಾನಿನ್ನು
ಬಂದುಬಿಡು ಕಂದ.
No comments:
Post a Comment