Saturday, 20 February 2016

poem - 84 - quadruplets

ಅವಳ ಹುಟ್ಟುಹಬ್ಬದ ದಿನ
ನಮಗೆಲ್ಲರಿಗೂ ಫೋಟೊ ಮೇಲೆ ಕಣ್ಣು
ಅವಳಿಗೊ ಮುಂದಿಟ್ಟ
ಅಲಂಕೃತ ಕೇಕ್ನ ಮೇಲಿತ್ತು ಕಣ್ಣು.


 ಎಷ್ಟು ಭಾರ ಜೀವನ
ಹೊರಲಿ ಹೇಗೆ ವಜನ?
ಚಿಂತಿಸುತ್ತಿದ್ದಾಗ ಕಣ್ಣಿಗೆ ಕಂಡ
5
ಕೆಜಿ ಹೊತ್ತಿದ್ದ ಹಸುಕಂದ.

ಮಂಗಳಮುಖಿಯರಿಂದ ರಕ್ಷಿಸಲ್ಪಟ್ಟ ಬಾಲಕ - ಸುದ್ದಿ ಓದಿದಾಗ ಮನದಿ ಮೂಡಿದ ದ್ವಿಪದಿ ಇದು -
ಮಗುವಿನ ಬಗ್ಗೆ ಮಂಗಳಮುಖಿಯರ ಮಾನವೀಯತೆ,
ಮೇಲೆಂದು ಬೀಗುವ ಮಾನವರಲಿ
ಮಮತೆಯ ಬೆಳೆಸುವುದೇ
? !

poem - 83 - ಸತ್ಯ!

ಸತ್ಯ! !
ಸತ್ಯವನ್ನೇ ಹೇಳಬೇಕು
ಎನ್ನುತ್ತಾರೆಲ್ಲರೂ,
ಎಂತಹ ಪರಿಸ್ಥಿತಿಯಲ್ಲಿಯೂ
ನಿಜವನ್ನೇ ನುಡಿಯಬೇಕೆನ್ನುತ್ತಾರೆಲ್ಲರೂ.
ವೈದ್ಯ ಕೇಳುತ್ತಾನೆ:
ಕೊನೆಯುಸಿರೆಳೆವಾಗ
ವ್ಯಕ್ತಿ ಕೇಳುತ್ತಾನೆ
"
ನಾ ಬದುಕಬಹುದೇ?"
ಮುಖಕ್ಕೆ ರಾಚುವಂತೆ
ಹೇಳಲೇ 'ಇಲ್ಲ' ಎಂದು;
ಅಥವಾ
"
ಕಳಕೋಬೇಡ ನಂಬಿಕೆಯ,
ಎಲ್ಲವೂ ಮುಗಿದಿಲ್ಲ"
ನವಿರಾದ ಸುಳ್ಳು ಹೇಳಿ
ಮೊಗದಲಿ  ಕೆಲಹೊತ್ತಾದರೂ
ನೆಮ್ಮದಿಯ ನೋಡಲೇ?
ಏನ ಹೇಳಲಿ ನಾನು???

Poem - 82 - ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ಬ್ರಿಟಿಷರ ಅಧಿಪತ್ಯಕೆ
ಸಾಮ್ರಾಜ್ಯಶಾಹಿ ಆಡಳಿತಕೆ
ಮಹಾರಾಜರ ಪದ್ಧತಿಗೆ
ಅಂತ್ಯ ಹಾಡಿದ ದಿನವಿದು.
ಪ್ರಜೆಗಳೇ ಪ್ರಭುಗಳೆಂದು
ಸಂವಿಧಾನ ಶ್ರೇಷ್ಠವೆಂದು
ಜನ ಸಾರ್ವಭೌಮರೆಂದು
ಜಗಕೆ ಸಾರಿದ ದಿನವಿದು.
ವಂಶಾಧಿಕಾರ ಇಲ್ಲವೆಂದು
ಚುನಾವಣೆಯೇ ಮುಖ್ಯವೆಂದು
ಎಲ್ಲ ಸ್ಥಾನ ಎಲ್ಲರಿಗೆಂದು
ಘೋಷ ಎದ್ದ ದಿನವಿದು
ಎಲ್ಲರೂ ಸಮಾನರೆಂದು
ಜಾತಿ ಧರ್ಮ ಬೇಡವೆಂದು
ಎಲ್ಲರೂ ಸೋದರರೆಂದು
ಪ್ರಕಟಪಡಿಸಿದ ದಿನವಿದು
ಎಲ್ಲರೂ ಸ್ವತಂತ್ರರೆಂದು
ಆತ್ಮಗೌರವ ಉಂಟು ಎಂದು
ನ್ಯಾಯವೆಲ್ಲರ ಪಾಲೆಂದು
ಸಾರಿ ಹೇಳಿದ ದಿನವಿದು.
ದೇಶದ ಐಕ್ಯತೆಗೆಂದು
ಎಲ್ಲರ ಸಮೃದ್ಧಿಗೆಂದು
ಒಗ್ಗೂಡಿ ನಡೆಯೋಣವೆಂದು
ಕಂಕಣ ತೊಟ್ಟ ದಿನವಿದು.
ಎಲ್ಲ ಧೀರ ಯೋಧರಂದು
ಮಾಡಿದ ಬಲಿದಾನವಿಂದು
ನಾವು ನೆನಪಿಸಿಕೊಂಡು
ಸಾಗೋಣ ದೇಶ ಕಟ್ಟಲೆಂದು.

Translated Poem 8 - ಛಲ

ಛಲ
ಯಾರೋ ಹೇಳಿದರು
ಮಾಡಲಾಗದು ಎಂದು;
ನಗುತ್ತಾ ಉತ್ತರಿಸಿದಳಾಕೆ,
ಇರಬಹುದು; ಆಗದೆಂದು
ಹೇಗೆ ಹೇಳಲಿ,
ಪ್ರಯತ್ನಿಸದೆ ನಾನೇ ಅದಕೆ?"
ಮುಖದಿ ಸ್ವಲ್ಪ ನಗುವ ತೋರಿ
ಅದರ ಹಿಂದೆ ಚಿಂತೆ ಮರೆಸುವ
ತೋಳ ಮಡಿಚಿ ನಿಂತಳಾಕೆ ;
ಮಾಡಲಾಗದೆಂದ ಕೆಲಸ
ಹಾಡುತ್ತಲೇ, ಮಾಡುತ್ತಲೇ
ಮುಗಿಸಿಬಿಟ್ಟಳಾಕೆ. 
(
ಇದು ಇಂಗ್ಲಿಷ್ ಕವಿತೆಯೊಂದರ ಅನುವಾದ

poem - 81 - ಹಣತೆ ಹಚ್ಚಬಾರದೇಕೆ?

ಹಣತೆ ಹಚ್ಚಬಾರದೇಕೆ?

ಕತ್ತಲೆಯೆಂದು ಕೈಚೆಲ್ಲಿ ಕೂರುವ ಬದಲು
ಸಣ್ಣದೊಂದು ಹಣತೆಯ ಹಚ್ಚಬಾರದೇಕೆ?
ಕಷ್ಟಗಳೆಲ್ಲೆಡೆ ಎಂದು ಕೊರಗುವ ಬದಲು
ಸುಖವನ್ನರಸಲು ಶ್ರಮಪಡಬಾರದೇಕೆ?

POEM 80 - ಧರ್ಮ - ಪ್ರೀತಿ

ಧರ್ಮ - ಪ್ರೀತಿ

 'ಧರ್ಮಕ್ಕಾಗಿ ಜೀವ'
ಬ್ಯಾಡ್ಜ್ ಧರಿಸಿದ್ದವ
ಪೊಲೀಸರ ಏಟಿಗೆ 
ಬಿದ್ದಾಗ ಕೆಳಗೆ
ಎತ್ತಿಕೊಂಡು ಹೋದವ
ಆಸ್ಪತ್ರೆಯಲಿ ರಕ್ತಕೊಟ್ಟವ
ಜೀವ ಉಳಿಸಿದವ
ಇನ್ನೊಂದು ಧರ್ಮದವ
ಎಂದು ತಿಳಿದಾಗ
ನಿಜವ ಅರಿತಾಗ
ಮನದಿಂದ ಮೌಢ್ಯವ
ಶರ್ಟಿಂದ ಲಾಂಛನವ
ಕಿತ್ತೆಸೆದನವ ದೂರ
ಕಟ್ಟಿದ ಪ್ರೀತಿಯ ಹಾರ.

poem 79 - ಮಾನವೀಯತೆ ಇದೆಯೆನಬೇಕೆ?

 ಮಾನವೀಯತೆ ಇದೆಯೆನಬೇಕೆ?

ರಸ್ತೆಯ ನಡುವಿನಲಿ
ಹಾಡುಹಗಲಿನಲಿ 
ಅಪಘಾತಕ್ಕೆ ಒಳಗಾಗಿ
ಜೀವ ನೋವಾಗಿ
ನರಳಾಡುತ್ತಿರಲು
ನೆರವ ಬೇಡಲು
ಸಹಾಯಹಸ್ತ ಚಾಚದೆ
ನೆರವನು ನೀಡದೆ
ವೀಡಿಯೊ ತೆಗೆಯುವವರ
ಪೋಟೊ ಕ್ಲಿಕ್ಕಿಸುವವರ
ಮನುಷ್ಯರೆನಬೇಕೇ?
ಮಾನವೀಯತೆ ಇದೆಯೆನಬೇಕೆ?