ಇವರೇಕೆ ಹೀಗೆ?
ಕಾಲೇಜಿಗೆ ಸೇರುವರು
ಅಪ್ಪ ಅಮ್ಮನ ಹಣದಲ್ಲಿ
ಸೌಲಭ್ಯಗಳ ಪಡೆಯುವರು
ಎಲ್ಲಾ ಬಹಳ ಸುಲಭದಲ್ಲಿ.
ತರಗತಿಗೆ ಹೋಗುವರು
ಬೇಕೆಂದಾಗ ತಮ್ಮಿಷ್ಟದಲ್ಲಿ
ಪಾಠವನು ಕೇಳುವರು
ಅತಿಯಾದ ಕಷ್ಟದಲ್ಲಿ.
ಬೇಕಿವರಿಗೆ ಗೆಳೆಯರು
ಕಳೆಯಲು ಸಮಯವಿಲ್ಲಿ
ಬೇಡವರಿಗೆ ಗುರುಹಿರಿಯರು
ಮಾತ ಕೇಳಲು ಕಾಲವೆಲ್ಲಿ?
ಗುರುಗಳ ದೂಷಿಸುವರು
ಅವರಿವರ ಬಳಿ, ಅಲ್ಲಿಇಲ್ಲಿ
ತರಗತಿಗೆ ಹೋಗುವರು
ಹಾಜರಾತಿ ಕಡ್ಡಾಯ ಇಹುದಲ್ಲಿ.
ಇವರೆಂದೂ ಗಂಭೀರವಾಗರು
ಓದಿನ ವಿಷಯದಲ್ಲಿ
ಫೇಲಾದಾಗ ಈ ಹುಡುಗರು
ಮುಳುಗುವರು ಕೆರೆಯಲ್ಲಿ.
ಈ ರೀತಿ ಇರುವವರು
ಸಾಧಿಸುವುದು ಎಲ್ಲಿ
ಇಂತಹ ವಿದ್ಯಾರ್ಥಿಗಳಿವರು
ಶಿಕ್ಷಣಕೆ ಅರ್ಥವೆಲ್ಲಿ?
No comments:
Post a Comment