ಸಹಕಾರ
ಬಾಳಬಹುದು ಸಹಕಾರವಿದ್ದರೆ
ಸಹಿಸಬಹುದು ನೋವುಗಳ,
ಹಂಚಿಕೊಳುವ ಗೆಳೆಯರಿದ್ದರೆ;
ಹೊರಬಹುದು ಕಷ್ಟಗಳ,
ಸ್ಪಂದಿಸುವ ಸಂಗಾತಿಯಿದ್ದರೆ
;
ತಾಳಬಹುದು ದುಃಖವ,
ಅದ ಮರೆಸುವ ತಾಯಿದ್ದರೆ;
ಎದುರಿಸಬಹುದು ಸಮಸ್ಯೆಗಳ,
ಸರಿಪಡಿಸುವ ತಂದೆಯಿದ್ದರೆ;
ಸೈರಿಸಬಹುದು ಕಣ್ಣೀರ,
ಒರೆಸುವ ಸೋದರಿಯರಿದ್ದರೆ
ತಡೆದುಕೊಳ್ಳಬಹುದು ದುಗುಡವ,
ಮರೆಸುವ ಅಣ್ತಮ್ಮಂದಿರಿದ್ದರೆ;
ನಲಿವಿನಿಂದಿರಬಹುದು ಜೀವನದಿ
ಎಲ್ಲರ ಸಹಕಾರವಿದ್ದರೆ.
No comments:
Post a Comment