ಮಗು ನನ್ನದೇ
ಹಿಂದೊಮ್ಮೆ ನಿನ್ನನ್ನು
ಎತ್ತಿಕೊಂಡಿದ್ದಾಗ,
ಯಾರೋ ಕೇಳಿದ್ದರು,
ಈ ಮಗು ನಿಮ್ಮದೇ?
ಉತ್ತರಿಸಿದ್ದೆ ನಾನಂದು,
ಗೆಳತಿಯದು, ಆದರೂ
ನನ್ನದೆಂದು.
ಎಷ್ಟೋ ವರುಷದ ನಂತರ
ಅನಿಸಿದ್ದು ಸುಳ್ಳಲ್ಲ
-
ಈ ಮಗು ನನ್ನದೇ
ಆಗಿದ್ದರೆಂದು,
ಅದೊಂದು ಕ್ಷಣ ಮಾತ್ರ,
ಉತ್ತರ ಮತ್ತದೇ
ಗೆಳತಿಯದು, ಆದರೂ
ನನ್ನದೆಂದು.
No comments:
Post a Comment