Sunday, 3 May 2015

POEM 16 - ಸಂಬಂಧ

ಸಂಬಂಧ
ಯಾವ ಜನುಮದ
ಋಣವೊ ಇದು?
ಯಾವ ಜನ್ಮದ ಬಂಧವೊ?
ಯಾವ ಪುಣ್ಯದ ಫಲವೊ?
ಎಲ್ಲೊ ಇದ್ದ ನನಗೂ
ಇಲ್ಲೇ ಇದ್ದ ನಿನಗೂ
ತಾಯಿ ಮಗುವಿನ ಸ್ನೇಹವು
ಎತ್ತಣಿಂದೆತ್ತ ಸಂಬಂಧವೋ?
ಮನಸೆಳೆದೆ ನಿನ್ನ ಪ್ರೀತಿಯಿಂದ
ಸೆರೆಹಿಡಿದೆ ನಿನ್ನ ಸ್ನೇಹದಿಂದ
ಬಂಧಿಸಿದೆ ಮುಗ್ಧ ನಗುವಿನಿಂದ
ಸೆಳೆದುಕೊಂಡೆ ಅಕ್ಕರೆಯಿಂದ.
ನಿನ್ನ ವಾತ್ಸಲ್ಯಕೆ ನಮಿಸುತ
ನಿನ್ನ ನೇಹ ಬಯಸುತ
ಹಾರೈಸುವೆ ಎಂದೂ ನೀನಿರು

ನಗುನಗುತ್ತಾ, ಅನವರತ!

No comments:

Post a Comment