Sunday, 3 May 2015

POEM 22 - ಎದೆಗುಂದದಿರು ಕಂದ

ಎದೆಗುಂದದಿರು ಕಂದ

ಕತ್ತಲು ಸುತ್ತಲು ಕವಿಯುತಿರೆ
ಕಾರ್ಮೋಡಗಳು ಮುತ್ತುತಿರೆ
ಭೋರನೆ ಮಳೆಯು ಸುರಿಯುತಿರೆ
ದಾರಿಯು ಸಾಗಲು ಕಾಣದಿರೆ,
ಎದೆಗುಂದದೆ ನೀ ಕಂದ
ಮುಂದಕೆ ನುಗ್ಗು ಛಲದಿಂದ.
ಕಷ್ಟಕಾರ್ಪಣ್ಯಗಳೇ ಕಾಣುತಿರೆ
ಸೋಲುಗಳೇ ಎದುರಾಗುತಿರೆ
ನಿರಾಶೆಯ ನೋವು ಕಾಡುತಿರೆ
ಧೃತಿಗೆಡದೆ ನೀ ಕಂದ
ಎದುರಿಸು ಜೀವನ ಛಲದಿಂದ.
ಕತ್ತಲು ಎಂದೂ ಕರಗಲೇಬೇಕು
ಹಗಲಿಗೆ ದಾರಿ ನೀಡಲೆಬೇಕು,
ಕಷ್ಟಕಾರ್ಪಣ್ಯಗಳು ತೀರಲೆಬೇಕು,
ಬಾಳಲಿ ಬೆಳಕು ಮೂಡಲೆಬೇಕು
ಧೈರ್ಯದಿಂದ ನೀ ಕಂದ

ಸಾಧಿಸು ಗುರಿಯ ಛಲದಿಂದ.

No comments:

Post a Comment