Sunday, 3 May 2015

POEM 13 - ಮುನಿಸು ಏಕೆ ಕಂದ?

ಮುನಿಸು ಏಕೆ ಕಂದ?

ಮುನಿಸು ಏಕೆ ಕಂದ?
ದೂರವೇಕೆ ನಿಂತಿರುವೆ
ಬಳಿಗೆ ಏಕೆ ಬಾರದಿರುವೆ
ಏಕೆ ಮುನಿಸಿಕೊಂಡಿರುವೆ
ಮೌನವೇಕೆ ಕಂದ?
ಪತ್ರ ಬರೆಯಲಿಲ್ಲವೆಂದು
ಫೋನ್ ಮಾಡಲಿಲ್ಲವೆಂದು
ನೋಡ ಬರಲಿಲ್ಲವೆಂದು
ಕೋಪವೇಕೆ ಕಂದ?
ಮೊನ್ನೆ ಪತ್ರ ಬರೆದಿರುವೆ
ನೆನ್ನೆ ಫೋನ್ ಮಾಡಿರುವೆ
ಈಗ ನೋಡ ಬಂದಿರುವೆ
ಮಾತನಾಡು ಕಂದ.
ನೀನು ಹೀಗೆ ಬೇಸರಿಸಿದರೆ
ದುಃಖ ಪಡುವಂತಾದರೆ
ಕಣ್ಣ ನೀರ ಹಾಕಿದರೆ
ಸಹಿಸಲ್ಹೇಗೆ ಕಂದ?
ನನ್ನ ಮಗಳೇ ನೀ ಎಂದು
ನಿನ್ನವಳೇ ನಾನೆಂದು
ಹೇಳುತಿರುವೆ ನಾನಿಂದು
ನಗು ನೀನು ಕಂದ.

No comments:

Post a Comment