Sunday, 3 May 2015

POEM 39 - ಸಂಬಂಧ

ಸಂಬಂಧ
ಆತ ಅವಳ
ಒಡಹುಟ್ಟಿದವನಲ್ಲ
ರಕ್ತಸಂಬಂಧಿಯಲ್ಲ,
ನೆಂಟನಲ್ಲ, ಬಂಧುವಲ್ಲ
ಸ್ನೇಹಿತನಲ್ಲ,
ಒಟ್ಟಿಗೆ ಓದಿದವರೂ ಅಲ್ಲ,
ನೆರೆಹೊರೆಯವರು ಮೊದಲೇ ಅಲ್ಲ.
ಮತ್ತೆ ರೀತಿಯ ಸಂಬಂಧ
ಬೆಳೆದದ್ದು ಹೇಗೆ?
ಆತ್ಮೀಯ ಸೋದರನಾಗಿ
ಅವಳ ಬಾಳಲ್ಲಿ
ಬಂದದ್ದು ಹೇಗೆ?
ಪ್ರೀತಿ ಬೆಳೆಯಲು
ಒಂದೇ ಮನೆಯಲ್ಲಿ
ಹುಟ್ಟಬೇಕೇ?
ಮಮತೆ ಮೂಡಲು
ರಕ್ತಸಂಬಂಧಿಯೇ
ಆಗಿರಬೇಕೇ?
ಎರಡು ಮನಗಳ ನಡುವೆ
ಸೇತುವೆ ಕಟ್ಟಲು,
ಮಾನವೀಯತೆ

ಒಂದೇ ಸಾಲದೇ?

No comments:

Post a Comment