Sunday, 3 May 2015

POEM - 19 - ತಪ್ಪು ಯಾರದು?

ತಪ್ಪು ಯಾರದು?

ಒಬ್ಬರಿನ್ನೊಬ್ಬರ ದೂಷಿಸಿ
ಶಿಕ್ಷಣವ ಕಲುಷಿತಗೊಳಿಸಿ
ಸಾಗುತ್ತಿರುವರು ಇವರು
ಶಿಷ್ಯರು - ಶಿಕ್ಷಕರು
ತರಗತಿಗೇ ಬರುವುದಿಲ್ಲ
ಪಾಠವನ್ನು ಕೇಳುವುದಿಲ್ಲ
ಹೇಳಿದ್ದನ್ನು ಮಾಡೋದಿಲ್ಲ
ದೂರುವರು ಶಿಕ್ಷಕರು.
ತರಗತಿಗೇ ಬರುವುದಿಲ್ಲ
ಪಾಠ ಅರ್ಥ ಆಗೋದಿಲ್ಲ
ಪ್ರಶ್ನೆಗೆ ಉತ್ತರಿಸೋದಿಲ್ಲ
ದೂರುವರು ಶಿಷ್ಯರು.
ಕೋಲನೆತ್ತಿ ಬೀಸುವರು
ಕೆಟ್ಟದಾಗಿ ಬೈಯ್ಯುವರು
ಅಪಮಾನವ ಮಾಡುವರು
ಇವರು ಗುರುಗಳೇ?
ಮಾತಿಗೆಲ್ಲಿ ಬಗ್ಗುವರು?
ಹೇಳಿದ್ದೆಲ್ಲಿ ಕೇಳುವರು?
ಎಲ್ಲ ಮೀರಿ ನಿಂತವರು
ಇವರು ಶಿಷ್ಯರೇ?
ಯಾರು ತಪ್ಪು ಯಾರು ಸರಿ ?
ಹೇಳುವವರು ಯಾರು?
ಯಾವುದು ಸರಿ ಮಾದರಿ?
ಸರಿಪಡಿಸುವರು ಯಾರು?
ದೂಷಿಸುತ್ತ ಕುಳಿತರೆ
ಪರಿಹಾರ ಸಿಗುವುದೇ?
ಹಳಿಯುತ್ತ ಹೊರಟರೆ
ಉತ್ತರ ದೊರಕುವುದೇ?
ಇಬ್ಬರೂ ಸೇರಿಕೊಂಡು
ಗೊಂದಲವ ಬಿಡಿಸಬೇಕು
ಒಟ್ಟಿಗೆ ಕುಳಿತುಕೊಂಡು
ಉತ್ತರವ ಹುಡುಕಬೇಕು.
ಶಿಕ್ಷಣದ ನಿಜ ಅರ್ಥವನ್ನು
ಇಬ್ಬರೂ ಅರಿಯಬೇಕು
ಅದರ ಸರಿ ಉದ್ದೇಶವನ್ನು

ಸಾಧಿಸೆ ಪಣತೊಡಬೇಕು.

No comments:

Post a Comment