ಬಾಳ ಗೆಳತಿ
ಬಾಳ ಕೊಟ್ಟ ಗೆಳತಿ
ನೀನು
ಹೊಸ ಬದುಕನಿತ್ತೆ ನೀನು
ಬೆಳಕ ತಂದೆ ನೀನು
ನಿನಗೇನಿತ್ತರೆ ಸಾಟಿಯು?
ಕಷ್ಟಗಳ ಹಂಚಿಕೊಂಡೆ
ಕಣ್ಣೀರನ್ನು ಒರೆಸಿದೆ
ಕಹಿಗಳನೆಲ್ಲ ಮರೆಸಿದೆ
ನಿನಗೇನಿತ್ತರೆ ಸಾಟಿಯು?
ಸಂತೋಷವನೇ ನೀಡಿದೆ
ಸರಿದಾರಿಯನೇ ತೋರಿದೆ
ಜೀವನೋತ್ಸಾಹ ತುಂಬಿದೆ
ನಿನಗೇನಿತ್ತರೆ ಸಾಟಿಯು?
ಕೊಡುವೆನೆಂದು ಮಾತ
ನಿನಗೆ
ನೀನಿತ್ತ ಬೆಳಕ ಹರಡುವೆ
ಜಗಕೆ
ನೀನಿತ್ತ ಬದುಕ ಸವೆಸುವೆ
ಜನಕೆ
ಸರಿತೂಗವುದೇನು ನೋಡು!
No comments:
Post a Comment