Sunday, 3 May 2015

POEM 14 - ಬದುಕುವುದು ಹೇಗೆ?

ಬದುಕುವುದು ಹೇಗೆ?

ಹೊಸ ಬಟ್ಟೆ
ಇಲ್ಲವೆಂದು ಒದ್ದಾಡುವವರು,
ಮೈಮುಚ್ಚಲು ಬಟ್ಟೆಯೇ
ಇಲ್ಲದವರ ಕಂಡು.
ಕಂಪನಿ ಶೂ
ಇಲ್ಲವೆಂದು ಕೊರಗುವರು
ಶೂ ಹಾಕಿಕೊಳ್ಳಲು ಕಾಲೇ
ಇಲ್ಲದವರ ಕಂಡು.
ಮೃಷ್ಟಾನ್ನ ಭೋಜನ
ಇಲ್ಲವೆಂದು ಮರುಗುವರು,
ತುತ್ತು ಅನ್ನಕ್ಕೂ ಗತಿ
ಇಲ್ಲದವರ ಕಂಡು.
ಸ್ವಂತ ಮನೆ
ಇಲ್ಲವೆಂದು ಆಳುವವರು
ಚಳಿಯಲ್ಲೂ ಬೀದಿಯಲಿ
ಮಲಗುವರ ಕಂಡು.
ಸರ್ಕಾರಿ ಕೆಲಸ
ಇಲ್ಲವೆಂದು ಗೋಳಾಡುವವರು
ಫುಟ್ ಪಾತಿನಲಿ ಶೂ ಪಾಲಿಷ್
ಮಾಡುವರ ಕಂಡು.
ರಸ್ತೆ ಹಾಳಾಗಿದೆ
ಎಂದು ದೂರುವವರು
ಮುರಿದ ಸೇತುವೆಯ ಮೇಲೆ
ನಡೆಯುವವರ ಕಂಡು.
ಇಲ್ಲವೆಂಬ ಭಾವವೊಮ್ಮೆ
ಪಕ್ಕಕಿಟ್ಟು ನೋಡಿದರೆ
ಬದುಕು ಸಹನೀಯವಾಗದೇ?

ಬದುಕಲು ಸಾಧ್ಯವಾಗದೇ?

No comments:

Post a Comment