Sunday, 3 May 2015

POEM - 29 - ಹುಡುಕುವಿಕೆ

ಹುಡುಕುವಿಕೆ
ಪುಟ್ಟ ಬೀಗದ ಕೈ
ಕಳೆದುಹೋದಾಗ
ರಾಶಿ ಕೈಗಳಲ್ಲಿ
ಹುಡುಕುಡುಕಿ
ಬೀಗ ತೆರೆಯಲು
ಯತ್ನಿಸುವೆವು.
ಬಾಳಲಿ ಕಷ್ಟ
ಎದುರಾದಾಗ
ರಾಶಿ ಉತ್ತರಗಳಲಿ
ಹುಡುಕುಡುಕಿ
ಆಯ್ಕೆಯನೇಕೆ
ನಾವ್ ಮಾಡೆವು?

No comments:

Post a Comment