Sunday, 3 May 2015

POEM - 20 - ಯುಗಾದಿ

ಯುಗಾದಿ 

ಬೇವು ಬೆಲ್ಲದ ಮಿಶ್ರಣ
ಜೀವನ,
ಕಷ್ಟಗಳೇನೆ ಇರಲಿ
ನಷ್ಟಗಳೇನೆ  ಬರಲಿ
ನಂತರ ಬರುವುದು
ಸುಖವೆಂದು
ಕಹಿಯೊಂದಿಗೆ
ಸಿಹಿ ಇದೆಯೆಂದು
ಎರಡನು ಸಮವಾಗಿ
ಸ್ವೀಕರಿಸೆಂದು
ಬದುಕು ಆಗ
ಸರಿಯೆಂದು
ಯುಗಾದಿಯಿಂದು
ಸಾರುತಿದೆ
ಹೊಸ ಕನಸನು
ಬಿತ್ತಲು ಬಂದಿದೆ.
ಸಿಹಿಯನು ಸವಿಯುವ
ಮನಸಿರಲಿ
ಕಹಿಯನು ಸಹಿಸುವ
ಛಲವಿರಲಿ
ಏನೇ ಬಂದರೂ
ಎದುರಿಸಿ ನಡೆಯುವ
ಸಾಹಸ ಭಾವವು
ನಮಗಿರಲಿ.
ಹೊಸ ವರುಷವು
ಸಾಧನೆಯ ಹರುಷವ
ಹೊತ್ತು ತರಲಿ .

No comments:

Post a Comment