ಇಂತಹ ಮದುವೆ ಬೇಕೆ?
ಮೂರು ಘಂಟೆ ನಿದ್ದೆ
ಸಾಕು
ಹಗಲು ರಾತ್ರಿ ಗಾಣದ
ಎತ್ತಿ ನಂತೆ ದುಡೀಬೇಕು.
ತೌರು ಮನೆ ತೊರೆಯಬೇಕು
ಸಂಬಂಧಗಳ ಕಳಚಬೇಕು
ಅಪ್ಪ ಅಮ್ಮ ಅಣ್ಣ
ತಂಗಿ
ವ್ಯಾಮೋಹ ಬಿಡಬೇಕು.
ನೌಕರಿಯ ಮಾಡಬೇಕು
ಸಂಬಳವ ತರಬೇಕು
ಎಲ್ಲ ತಂದು ಪತಿಗೆ
ನೀಡಿ
ಕಾಸಿಗೆ ಕೈ ಒಡ್ಡಬೇಕು.
ಹೇಳಿದಾಗ ಮಂಚ ಏರಬೇಕು
ಮಗುವ ಹೆತ್ತು ಕೊಡಬೇಕು
ಗಂಡೊ ಹೆಣ್ಣೊ ನಿರ್ಧಾರ
ಗಂಡನಿಗೆ ಬಿಡಬೇಕು.
ಬಟ್ಟೆ ಒಡವೆ ಬೇಡಬೇಕು
ತುತ್ತು ಅನ್ನ ಕೇಳಬೇಕು
ಹೊರಗೆ ಎಲ್ಲೆ ಹೋದರೂ
ವರದಿ ಎಲ್ಲ ನೀಡಬೇಕು.
ಏನು ಬೇಕು ಎಷ್ಟು
ಬೇಕು
ಹೇಗೆ ಬದುಕಿ ಬಾಳಬೇಕು
ಕೂತು ನಿಂತು ನಡೆಯಲು
ಅನುಮತಿಯ ಪಡೆಯಬೇಕು.
ಈ ರೀತಿಯ ಬದುಕು
ಸಾಕು
ಸ್ವಾತಂತ್ರ್ಯವ ಸವಿಯಬೇಕು
ಹಕ್ಕಿಯಂತೆ ಹಾರಾಡುತ್ತ
ಮುಕ್ತವಾಗಿ ಬದುಕಬೇಕು.
ಮದುವೆ ಹೊಣೆಯಾಗಬೇಕು
ಇಬ್ಬರೂ ಸಮನಾಗಬೇಕು
ಮನಗಳ ಮಿಲನದಿಂದಲೇ
ಬದುಕ ಬಂಡಿ ಸಾಗಬೇಕು.
No comments:
Post a Comment