ತುಡಿತ
ಇನ್ನೆಷ್ಟು ದಿನ
ಸಹಿಸಬೇಕು ಈ ಕಷ್ಟ?
ಮನ ಹತ್ತಿರವಾಗಿಯೂ
ಈ ದೂರವೇಕೆ?
ನೋಡುವ ತವಕವಿದ್ದರೂ
ಈ ಹಿಂಜರಿಕೆಯೇಕೆ?
ಎಲ್ಲಕ್ಕೂ ಅನುಮತಿ ಬೇಕೆ?
ಪ್ರೀತಿಗೆ ಬೇಲಿಯೇ?
ಮಮತೆಗೆ ಅಂಕುಶವೇ?
ವಾತ್ಸಲ್ಯಕೆ ತಡೆಗೋಡೆಯೇ?
ಕಂದನಾಗಿ ನನ್ನ ಕರೆಗೆ
ಓಗೊಡೆಯಾ?
ಗೆಳತಿಯಾಗಿ ಪ್ರೀತಿಕರೆಗೆ
ಬಾರೆಯಾ?
ನೀನಿರುವೆ ಹೃದಯಕ್ಕೆ ಹತ್ತಿರ
ಆದರೂ ಏಕಿಷ್ಟು ದೂರ?
ಕಾಯುತ್ತಿರುವೆ ನಾ
ನಿರಂತರ
ಮರೆಯಾಗುವುದೇ ಈ
ಅಂತರ?
ಭೇಟಿಯಾಗುವ ಭರವಸೆಯಿದೆ
ಆಗುತ್ತಿಲ್ಲವೆಂಬ ಕೊರಗಿದೆ
ಈ ತುಡಿತಕ್ಕೆ ಕೊನೆ
ಎಂದು?
ತೇದಿಯ ನೀ ಹೇಳಬಲ್ಲೆಯಾ?
ಮುಂದೊಮ್ಮೆ ಭೇಟಿಯಾಗಬಹುದೆಂಬ
ಭರವಸೆಯೂ ಇದೆ
ಈಗ ಭೇಟಿಯಾಗಲಾಗುತ್ತಿಲ್ಲವೆಂಬ
ಕೊರಗಿ ಇದೆ
ಈ ತುಡಿತಕ್ಕೆ ಕೊನೆ
ಎಂದು?
ತೇದಿಯ ನೀ ಹೇಳಬಲ್ಲೆಯಾ?
No comments:
Post a Comment