Sunday, 3 May 2015

POEM - 27 - ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ನೂರು ನೋವು ತಿಂದು ಜನ
ನಮಗೆ ಜೀವ ಕೊಟ್ಟರಲ್ಲ,
ಲಕ್ಷ ಪೆಟ್ಟು ತಿಂದು ಜನ
ಸ್ವಾತಂತ್ರ್ಯ ತಂದುಕೊಟ್ಟರಲ್ಲ
ನಮಗಾಗಿ ಕೋಟಿ ಜನ
ಬಲಿದಾನಗೈದರಲ್ಲ.
ಸರ್ವತಂತ್ರ ಸ್ವತಂತ್ರವೆಂದು
ಘೋಷಿಸಿದ ದಿನವಿದು,
ಗಣರಾಜ್ಯೋತ್ಸವದ ದಿನವಿದು.
ಅವರ ತ್ಯಾಗಬಲಿದಾನಗಳ
ನೆನೆಯುವ ದಿನವಿದು,
ಅವರಿಗೆಲ್ಲ ನಮ್ಮ ನಮನ
ಸಲಿಸುವ ದಿನವಿದು,
ದೇಶದೆಲ್ಲ ಜನತೆ
ಒಟ್ಟಾಗಬೇಕಾದ ಘಳಿಗೆಯಿದು
ಅವರ ಅಪೂರ್ಣ ಕನಸುಗಳ
ನನಸು ಮಾಡುವವೆಂದು
ಕಂಕಣ ಕೈಗೊಳ್ಳಬೇಕಾದ
ದಿನವಿದು.

No comments:

Post a Comment