Sunday, 3 May 2015

POEM 5 - KALIKE

ಕಲಿಕೆ
ಆಗಸದಂತೆ ನಮ್ಮ ಮನ
ವಿಶಾಲವಾಗಬಾರದೇಕೆ?
ಸಾಗರದಷ್ಟು ನಮ್ಮ ಮನ
ಆಳವಾಗಬಾರದೇಕೆ?
ಗಗನಚುಂಬಿ ಮರಗಳಂತೆ
ಎತ್ತರಕ್ಕೇರಬಾರದೇಕೆ?
ಆಲದ ಬಿಳಲಿನಂತೆ
ಭೂಮಿಯೊಳಕ್ಕಿಳಿಯದೇಕೆ?
ಸುಮದಂತೆ ನಾವು
ಸುವಾಸನೆ ಹರಡಬಾರದೇಕೆ?
ದುಂಬಿಯಂತೆ ನಾವು
ಮಧುವ ನೀಡಬಾರದೇಕೆ?
ಗಿಡಮರಗಳಂತೆ ನಾವು
ನೆರಳ ನೀಡಬಾರದೇಕೆ?
ಮಳೆಯಂತೆ ನಾವು
ತಂಪನೀಯಬಾರದೇಕೆ?
ರವಿಕಿರಣದಂತೆ ನಾವು
ಜೀವ ತುಂಬಬಾರದೇಕೆ?
ನದಿಯ ನೀರಿನಂತೆ
ಕೊಳೆ ತೊಳೆಯಬಾರದೇಕೆ?
ಪ್ರಕೃತಿಯಿಂದ ನಾವು
ಕಲಿಯಬಾರದೇಕೆ?

No comments:

Post a Comment