Sunday, 3 May 2015

POEM 28 - ಮಗುವಿನ ಮುನಿಸು

ಮಗುವಿನ ಮುನಿಸು

ಮಗುವಿನ ಮನಸು
ಅರಿವಾಗುವುದೇ ಕಷ್ಟ.
ಹೊರಗೆ ಹೋಗೋಣ
ಬರುವೆಯಾ ಎಂದಾಗ
ಒಲ್ಲೆ ಎನ್ನುತ್ತದೆ.
ನಾ ಹೋಗುವೆ ಎಂದರೆ
ಬಿಟ್ಟು ಹೋಗುವೆಯಾ?
ಗೋಳಿಡುತ್ತದೆ.
ಊಟ ಮಾಡೋಣ
ಬಾ ಎಂದಾಗ
ಒಲ್ಲೆ ಎನ್ನುತ್ತದೆ,
ನಾ ಮಾಡುವೆ ಎಂದರೆ
ಕಾಳಜಿಯೇ ಇಲ್ಲ
ಎಂದಳುತ್ತದೆ.
ಮಲಗೋಣ ಬಾ
ಎಂದು ಕರೆದರೆ
ನಿರಾಕರಿಸುತ್ತದೆ,
ನಾ ಮಲಗುವೆನೆಂದರೆ
ಅಕ್ಕರೆಯೇ ಇಲ್ಲ
ಮುನಿಸಿಕೊಳ್ಳುತ್ತದೆ.
ಅತಿಯಾಯಿತು ನಿನ್ನದು,
ನಾ ಮುನಿಸಿಕೊಂಡರೆ
ತೊದಲು ನುಡಿಗಳಲಿ
ಅಮ್ಮ, ನೀ ಅಂದ್ರೆ
ನಂಗಿಷ್ಟ,ತುಂಬಾ ಇಷ್ಟ,
ಪುಟ್ಟ ತೋಳುಗಳಿಂದ

ಕಾಲುಗಳ ತಬ್ಬುತ್ತದೆ.

No comments:

Post a Comment