Sunday, 3 May 2015

POEM 32 - ಪದಗಳು

ಪದಗಳು

ದಿನವೂ ಕೇಳುವ
ಅವೇ ಪದಗಳು
ಇದ್ದಕಿದ್ದಂತೆ
ಜೀವ ತಳೆಯುತ್ತವೆ,
ಭೂಮಿಯ ಹದಗೊಳಿಸುವ
ಮಳೆಹನಿಯಂತೆ,
ತಿಮಿರವ ಕಳೆವ
ರವಿಕಿರಣದಂತೆ
ಮನವ ಹದಗೊಳಿಸಿ
ಮೌಢ್ಯ ಕಳೆದು
ಬಾಳ ಬೆಳಗುತ್ತವೆ.
ತಿಳಿಯಲಿಲ್ಲವರಿಗೆ!

No comments:

Post a Comment