ಬಯಕೆ
ಅದೊಂದು ಸುಂದರವಾದ ಮುಂಜಾನೆ. ಬೆಟ್ಟಗಳ ಸಾಲು ನೋಡಲು ಬಹು ಮೋಹಕವಾಗಿತ್ತು. ಇಂದಂತೂ ದಿನಕ್ಕಿಂತ ಹೆಚ್ಚು ಚಂದವಾಗಿ ಕಾಣುತ್ತಿದೆ. ಹಾಲ್ಗಡಲೇ ಆ ಬೆಟ್ಟಗಳ ಮೇಲೆ ಹರಿಯುತ್ತಿದೆ0iÉುೀನೋ ಎಂಬಂತೆ ಅಲ್ಲಿ ಬೆಳ್ಳಿ ಮೋಡಗಳು ಸರಿಯುತ್ತಿದ್ದವು. ಆ ರಮ್ಯ ಮನೋಹರ ದೃಶ್ಯವನ್ನು ನೋಡುತ್ತಾ ನನ್ನನ್ನೇ ನಾನು ಮರೆತಿದ್ದೆ.
ಕೆಲವು ಕ್ಷಣಗಳ ನಂತರ ಒಂದು ಯೋಚನೆ ಬಂತು. ವಿಚಿತ್ರ ಯೋಚನೆ! ಆ ಮೋಡಗಳನ್ನು ಹಿಡಿಯಬೇಕು. ಅಷ್ಟು ಕೆಳಗೆ ಸಾಗುತ್ತಿದ್ದ ಮೋಡಗಳನ್ನು ಹಿಡಿಯಲಾಗದೇ?
ಸರಿ, ಯೋಚನೆ ಬಂದ ಮೇಲೆ ತಡ ಯಾಕೆ? ನಿರ್ಧಾರ ಮಾಡಿ ಹೊರಟೇಬಿಟ್ಟೆ. ಆ ಕಡೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬೆಟ್ಟದ ಬುಡ ಸಿಕ್ಕಿತು. ಅರ್ಧ ಪ್ರಪಂಚ ಗೆದ್ದಷ್ಟೇ ಸಂತೋಷವಾಗಿತ್ತು.
ಮೇಲೇರುತ್ತಾ ಹೋದೆ. ಮೋಡಗಳ ನಾಡಿನಲ್ಲಿ0iÉುೀ ಇದ್ದೀನೇನೋ ಎನ್ನಿಸಿತು. ಆದರೂ ಕೈಗಟುಕದು. ಇನ್ನೇನು ಸಿಕ್ಕೇ ಬಿಟ್ಟಿತು ಎನ್ನಿವಷ್ಟರಲ್ಲಿ ಮತ್ತೆ ಮೇಲೆ ಹೋಗಿಬಿಡಬೇಕೇ?
ಅದರ ಹಿಂದೆ ನಾನೂ ಏರುತ್ತಲೇ ಹೋದೆ. ಕೊನೆಗೆ ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಕಾಲು ಜಾರಿದಂತಾಯಿತು. ಕೆಳಗೆ ನೋಡುತ್ತೇನೆ-ಪ್ರಪಾತ. ಒಂದೆಡೆ ಭಯ ಆದರೆ, ಇನ್ನೊಂದೆಡೆ ಭಯವನ್ನು ಮೀರಿದ ಆಸೆ. ಹಾಗೊಂದು ಕ್ಷಣ ಹೀಗೊಂದು ಕ್ಷಣ. ಕೊನೆಗೆ ಆಸೆ0iÉುೀ ಗೆದ್ದು ಬಿಟ್ಟಿತು.
ಇಗೊ. . .. . . ಹಿಡಿದೇ ಬಿಟ್ಟೆ. ಆ ಬೆಳ್ಳಿ ಮೋಡಕ್ಕೆ ಕೈಚಾಚಿದೆ. ಅಯ್ಯೊ. . . . . ಇದೇನಾಯ್ತು. ನಿಂತಿದ್ದ ಬಂಡೆಯಿಂದ ಜಾರಿದ್ದೆ. ಅಮ್ಮಾ. . . .ಇನ್ನೇನು ಗತಿ?
ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದು ಕುಳಿತೆ. ಮೈ ಚಿವುಟಿಕೊಂಡು ಅದು ಕನಸೇ ಎಂದು ಖಾತ್ರಿಪಡಿಸಿಕೊಂಡೆ.
ಅಬ್ಬಾ! ಎಂತಹುದರಿಂದ ತಪ್ಪಿಸಿಕೊಂಡೆ, ಮರುಕ್ಷಣವೇ ಆ ಬೆಳ್ಳಿ ಮೋಡಗಳ ಸಾಲು ಕಣ್ಮುಂದೆ ಬಂದು ನಿಂತಿತು. ಸಿಗಲೇ ಇಲ್ಲವಲ್ಲ. ನಿರಾಶೆ ಮೂಡಿತು. ಸ್ವಲ್ಪ ಹೊತ್ತಾದ ನಂತರ ಅನಿಸಿತ್ತು ಆಕಾಶಕ್ಕೆ ಏಣಿ ಹಾಕೋದು ಅಂದ್ರೆ ಇದೇ ಏನೋ.
ಸಾಧಿಸುವಂತಹುದನ್ನು ಬಯಸಬೇಕೇ ಹೊರತು ಗಗನಕುಸುಮವನ್ನಲ್ಲ- ನಿರಾಸೆಯನ್ನು ಒದ್ದೋಡಿಸುವಂತೆ ವಿವೇಕ ಜಾಗೃತವಾಯಿತು. ಮನವನ್ನು ಆವರಿಸಿದ್ದ ಜಡತೆ ದೂರವಾಗುತ್ತಿದ್ದಂತೆ ಕಾಲೇಜಿಗೆ ಹೊರಡಲು ಸಿದ್ಧಳಾಗತೊಡಗಿದೆ.
No comments:
Post a Comment