ಜಯದೇವಿತಾಯಿ ಲಿಗಾಡೆ
ಜನನ: 23/06/1912, ಸೊಲ್ಲಾಪುರ
ಮರಣ:25/07/1989, ಬಸವಕಲ್ಯಾಣ
ತಂದೆ - ಚನ್ನಬಸಪ್ಪ ಮಡಕಿ
ಆಗರ್ಭ ಶ್ರೀಮಂತರು, ನೂರಾರು
ವಿದ್ಯಾರ್ಥಿಗಳಿಗೆ ಅನ್ನದಾನ. ಕೃಷಿ, ವ್ಯಾಪಾರ ಕ್ಷೇತ್ರಗಳಲ್ಲಿ ಖ್ಯಾತರು. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸಿದ್ಧರು.
ತಾಯಿ - ಸಂಗವ್ವ ಮಡಕಿ
ಬಡವರ, ಅನಾಥರ ತಾಯಿ. ಸ್ತ್ರೀ ಶಿಕ್ಷಣ, ಸ್ತ್ರೀ ಉನ್ನತಿಗೆ, ಸ್ತ್ರೀ ಜಾಗೃತಿಗೆ ಶ್ರಮ. ಸೇವಾ ಮನೋಭಾವ. ಸುಸಂಸ್ಕೃತ ಮನಸ್ಸು, ವೈಚಾರಿಕ ಮನೋಭಾವ. ಹಾಡುಗಾರಿಕೆ, ಭಾಷಣ ಮಾಡುತ್ತಿದ್ದರು.
ತಾತ ಮಲ್ಲಪ್ಪನವರು
ರಾಷ್ಟ್ರೀಯ ಐಕ್ಯತೆಗಾಗಿ ಹೋರಾಟ. ಕಾಂಗ್ರೆಸ್‍ಗೆ ಬೆಂಬಲ; ಹಳ್ಳಿಗಳಲ್ಲಿ ಪ್ರಚಾರ. ರಾಷ್ಟ್ರೀಯ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಣೆ. ಸ್ತ್ರೀ ಶಿಕ್ಷಣಕ್ಕಾಗಿ ಶ್ರಮ. ತಮ್ಮ ನಿವಾಸದಲ್ಲಿ ಮಹಿಳಾ ಜ್ಞಾನ ಮಂದಿರ, ಉಚಿತ ವಿದ್ಯಾರ್ಥಿ ನಿಲಯ ಆರಂಭ.
ಬಾಲ್ಯ, ವಿದ್ಯಾಭ್ಯಾಸ
ಬಡವ-ಬಲ್ಲಿದ ಎಂಬ ಭೇದವಿರಲಿಲ್ಲ. ತಾಯಿಯಿಂದ ಹಾಡುಗಳ ಕಲಿಕೆ, ಚಿಕ್ಕಂದಿನಿಂದಲೇ ಸಾಹಿತ್ಯಾಸಕ್ತಿ. ಬಾಲ್ಯದಿಂದಲೇ ಕನ್ನಡಾಭಿಮಾನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳಿಲ್ಲದ ಕಾರಣ 7ನೇ ತರಗತಿಯವರೆಗೆ ಮರಾಠಿ ಶಾಲೆಯಲ್ಲಿ ಕಲಿಕೆ. ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಕಲಿಕೆ. ನಂತರ ಸ್ವತಃ ಕನ್ನಡ ಕಲಿಕೆ.
ವೈವಾಹಿಕ ಜೀವನ
1926 - ಚನ್ನಮಲ್ಲಪ್ಪ ಲಿಗಾಡೆಯವರ ಜೊತೆ ವಿವಾಹ. ಸರಳ ಜೀವನ. ಐದೂ ಮಕ್ಕಳಲ್ಲಿ ಸೇವಾ ಮನೋಭಾವನೆ, ದಯಾರ್ದತೆ, ಸಾಹಿತ್ಯಾಸಕ್ತಿಯ ಬೆಳವಣಿಗೆ. 1949ರಲ್ಲಿ ಪತಿವಿಯೋಗ.
ಸಾಮಾಜಿಕ ಕಾರ್ಯ
ವೃದ್ಧಾಶ್ರಮಗಳು
ಕಾರ್ಮಿಕರಿಗಾಗಿ ಶಿಕ್ಷಣ ಕೇಂದ್ರಗಳ ಸ್ಥಾಪನೆ.
ಅಸ್ಪೃಶ್ಯತೆ ನಿವಾರಣೆಗೆ ಯತ್ನ
ಕುಟುಂಬ ಯೋಜನೆಗೆ ಬೆಂಬಲ
ನಿರಾಶ್ರಿತರಿಗೆ ಆಶ್ರಯ
ನೇತ್ರದಾನ ಶಿಬಿರ
ಮಹಿಳಾ ಕ್ಷೇತ್ರ
· ಸ್ತ್ರೀ ಪುರುಷರ ಸಮಾನತೆ, ಸ್ತ್ರೀ ಗೌರವ, ಮಹಿಳೆಯರ ಅಭಿವೃದ್ಧಿ, ಮಹಿಳಾ ಶಿಕ್ಷಣದ ಬಗ್ಗೆ ಕಾಳಜಿ. ಸ್ತ್ರೀಪರ ಚಿಂತಕರು. ಸ್ತ್ರೀಗೆ ಎಲ್ಲಾ ಹಂತದಲ್ಲೂ ರಕ್ಷಣೆ ಒದಗಿಸುವುದು ಸಮಾಜದ ಆದ್ಯ ಕರ್ತವ್ಯ. ಹೆಣ್ಣನ್ನು ಅಬಲೆ, ದಾಸಿ ಎನ್ನುವುದಕ್ಕೆ ವಿರೋಧ.
· ಅನಾಥ ವಿಧವೆಯರ ರಕ್ಷಣೆಗೆ ನೆಲೆ.
· ಶಿಕ್ಷಣ ನೀಡಲು ಮನೆಯಲ್ಲಿಯೇ ಸರಸ್ವತಿ ಮಂದಿರ ಆರಂಭ
· ಪ್ರೌಢಸ್ತ್ರೀ ಶಿಕ್ಷಣ ಯೋಜನೆ - ರಂಗೋಲಿ, ಕಸೂತಿ, ಆಟಪಾಠಗಳ ಜೊತೆಗೆ, ರಾಜಕೀಯ ತಿಳುವಳಿಕೆ, ದೇಶಾಭಿಮಾನದ ಬೆಳವಣಿಗೆ.
· ಜಾಗೃತಿ ಮೂಡಿಸಲು ಮಹಿಳೆಯರಿಗಾಗಿ ಪತ್ರಿಕೆಗಳು, ಅಕ್ಕನ ಬಳಗಗಳು, ನಿಧಿ ಸಂಗ್ರಹಣೆ, ಮಹಿಳೆಯರ ಅಭಿವೃದ್ಧಿಗಾಗಿ ಬಳಕೆ.
· ವರದಕ್ಷಿಣೆ ಪದ್ಧತಿಗೆ ವಿರೋಧ, ದುಂದುವೆಚ್ಚದ ಮದುವೆ ವಿರೋಧಿ.
· ಬಾಲ್ಯವಿವಾಹಕ್ಕೆ ವಿರೋಧ
· ಮಹಿಳೆಯರಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಕಾರ್ಯಕ್ರಮಗಳು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ
ಬರವಣಿಗೆಯ ಭಾಷೆ-ಕನ್ನಡ, ಮರಾಠಿ
1) ಜಯಗೀತ – ಆತ್ಮಗೀತ. 40 ಕವನಗಳ ಸಂಕಲನ
2) ತಾರಕ ತಂಬೂರಿ - 39 ಅನುಭಾವ ಗೀತಗಳ ಸಂಕಲನ
3) ತಾಯಿಯ ಪದಗಳು- 1959ರಲ್ಲಿ ಪ್ರಕಟಣೆ. 1000 ತ್ರಿಪದಿಗಳು. ಧರ್ಮ, ನೀತಿ, ದೇಶ, ದೇಶಭಕ್ತಿ, ಹೋರಾಟ ಸ್ವಾತಂತ್ರ್ಯ, ಸ್ತ್ರೀ ಪ್ರಾಮುಖ್ಯತೆ, ರಾಜಕಾರಣ ಮುಂತಾದವುಗಳಿವೆ.
4) ಸಿದ್ದರಾಮ ಪುರಾಣ- ಚಿಕ್ಕ ಹೊತ್ತಿಗೆ, ತಿಳಿಯಾದ ಭಾಷೆ. ಹೆಣ್ಣಿಗೆ ಸ್ಥಾನ ಕೊಟ್ಟ ವ್ಯಕ್ತಿಯಾಗಿ ಗುರುತಿಸಿದರು.
5) ಸಾವಿರದ ಪದಗಳು – 1986 ತ್ರಿಪದಿಗಳಲ್ಲಿ ಹುಟ್ಟಿ ಪಡೆದ ಜಾನಪದ ದಾಟಿಯಲ್ಲಿದೆ.
6) ಬಂದೇವು ಕಲ್ಯಾಣಕೆ - ಅನುಭಾವ ಪದಗಳ ಸಂಗ್ರಹ ಆದರ್ಶ ವ್ಯಕ್ತಿತ್ವದ ನಿರೂಪಣೆ, ವಾಸ್ತವ ಬದುಕಿನ ಚಿತ್ರಣ, ನೀತಿಬೋಧನೆ, ಇತ್ಯಾದಿ
7) ಅರುವಿನಾಗರದಲ್ಲಿ – 1987 ತ್ರಿಪದಿ ಸಂಗ್ರಹದ 10 ಶರಣರ ಗೀತಗುಚ್ಛಗಳಿವೆ. ಇದು ಶ್ರದ್ಧೆ ಭಕ್ತಿ, ಸಮರಸದ ಬಗ್ಗೆ ಇದೆ.
ದೇಶಪ್ರೇಮಿ ತಾಯಿ
ಇಂಗ್ಲಿಷರು ಲಿಂಗಾಯತ ಬೆಟಾಲಿಯನ್ ಸಿದ್ಧಮಾಡಲು ಭಾಷಣ ಮಾಡಲು ಕೇಳಿದಾಗ, ತಿರಸ್ಕರಿಸಿದರು.
ಬ್ರಿಟಿಷ್ ಸರ್ಕಾರದ ಕೈಸರ್ –ಇ -ಹಿಂದ್ ಪದವಿಗೆ ಧಿಕ್ಕಾರ.
ಗಾಂಧೀಜಿಯವರಿಂದ ಪ್ರೇರಿತ - ನೂಲು ತೆಗೆಯುವಿಕೆ, ಸ್ವದೇಶಿ ಬಟ್ಟೆ ಬಳಕೆ.
ತಿಲಕರಂತಹ ನಾಯಕರ ಬಗ್ಗೆ ಭಾಷಣ; ಸ್ತ್ರೀಯರಲ್ಲಿ ದೇಶಪ್ರೇಮ ತುಂಬುವಿಕೆ.
ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆ.
ಸ್ವಾತಂತ್ರ್ಯ ಸಮಾರಂಭಗಳ ನೇತೃತ್ವ.
ಕರ್ನಾಟಕ ಏಕೀಕರಣ ಚಳುವಳಿ
· ಅಖಂಡ ಕರ್ನಾಟಕಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೋರಾಟ.
· ಎಲ್ಲೆಡೆ ಪ್ರವಾಸ, ಆಡಳಿತ ಕನ್ನಡದಲ್ಲಿ ಎಂದು ಹೋರಾಟ. ಸಭೆ, ಸಹಿ ಸಂಗ್ರಹಣೆ, ಪ್ರತಿಭಟನೆ.
· ಬೇಲೂರು ಸಮ್ಮೇಳನದಲ್ಲಿ ಅಖಂಡ ಕರ್ನಾಟಕದ ಗೊತ್ತುವಳಿ ಒಮ್ಮತ.
· ಗಡಿನಾಡ ಭಾಗದಲ್ಲಿ ಪ್ರಚಾರ, ಸ್ವಂತ ಖರ್ಚಿನಲ್ಲಿ ಕನ್ನಡ ಶಾಲೆಗಳ ಆರಂಭ.
· ಸೊಲ್ಲಾಪುರ, ಬೆಳಗಾವಿ ಸೇರ್ಪಡೆಗೆ ಆಗ್ರಹ. ಪ್ರಮುಖ ವೇದಿಕೆಗಳಲ್ಲಿ ಭಾಷಣಗಳು.
ಕಟ್ಟಿದ ಸಂಘ ಸಂಸ್ಥೆಗಳು
· ರಾಷ್ಟ್ರೀಯ ಸೇವಾ ದಳದ ಪ್ರೌಢ ಸ್ತ್ರೀ ಶಾಖೆ
· ಸರಸ್ವತಿ ಸದನ – ಮಹಿಳಾ ಜಾಗೃತಿಗಾಗಿ
· ಮಹಿಳಾ ಜ್ಞಾನ ಮಂದಿರ - ಸ್ತ್ರೀ ಶಿಕ್ಷಣಕ್ಕಾಗಿ
· ಕನ್ನಡದ ಕೋಟೆ – ಗಡಿನಾಡಿನಲ್ಲಿ ಕನ್ನಡ ಉಳಿಸಲು
· ಶರಣ ಸಮಾಜ –ಅಸ್ಪೃಶ್ಯತೆ ನಿವಾರಣೆಗಾಗಿ
ಪ್ರಶಸ್ತಿಗಳು ಮತ್ತು ಸನ್ಮಾನಗಳು
1950 - ಮುಂಬೈನಲ್ಲಿ – ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿ ಅಧ್ಯಕ್ಷತೆ
1951 – ಕಾರ್ಮಿಕ ಸಾಕ್ಷರ ಮಂಡಳಿ ಸದಸ್ಯೆ
1955 – ಕರ್ನಾಟಕ ವಿವಿ ಸೆನೆಟರ್
1955-57 – ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ
1974 : ಕರ್ನಾಟಕ ವಿವಿಯ ಜಾನಪದ ಸಮ್ಮೇಳನದ ಅಧ್ಯಕ್ಷತೆ
1974 : ಮಂಡ್ಯ – 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರು.
1976: ಕರ್ನಾಟಕ ವಿವಿ ಡಿಲಿಟ್ ಪದವಿ.
1977 – ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯತ್ವ.
ಪ್ರಶಸ್ತಿ - ಸಿದ್ಧರಾಮೇಶ್ವರ ಪುರಾಣ –ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -1968 ರಲ್ಲಿ
ಬಿರುದುಗಳು
ಗಡಿನಾಡಿನ ಸಿಂಹಿಣಿ, ಮಹಾ ಕವಯತ್ರಿ, ಸಮಾಜ ಸೇವಕಿ, ಶರಣೆ, ಸಮಾಜ ಜೀವಿ, ವೀರ ಮಹಿಳೆ, ಸರಳತೆ-ಸೌಜನ್ಯಗಳ ಸಾಕಾರಮೂರ್ತಿ

No comments:
Post a Comment