ಬದುಕಬೇಕು ಏಕೆ?
ಬದುಕಬೇಕು ಏಕೆ
ಯಾರಿಗಾಗಿ ಬದುಕು?
ಜಗ ಮೆಚ್ಚುವ ಸೌಂದರ್ಯವಿಲ್ಲ
ತಾಯ್ತಂದೆಯರ ಪ್ರೀತಿಯ ತವರಿಲ್ಲ
ಒಲ್ವಿನಾಸರೆಯ ಪತಿಗೃಹವಿಲ್ಲ
ತೆವಳುತ್ತಾ ತೊಡೆಯನೇರುವ ಕಂದನಿಲ್ಲ
ಕೈತುಂಬ ಸಂಬಳದ ಉದ್ಯೋಗವಿಲ್ಲ
ಕಷ್ಟಸುಖವನು ಹಂಚಿಕೊಳ್ಳುವ ಮಿತ್ರರಿಲ್ಲ
ಯಾರಿಲ್ಲ, ಏನೂ ಇಲ್ಲ
ಜೀವನದಿ ಆಸೆಯೇ ಇಲ್ಲ
ಬದುಕಬೇಕು ಏಕೆ?
ಯಾರಿಗಾಗಿ ಬದುಕು?
ಬದುಕಲೇಬೇಕು!
ನಿನಗಾಗಿಯೇ ಬದುಕು.
ಹೊರಗೆ ಕಾಣುವ ಚೆಲುವು ಮಾತ್ರ ಸೌಂದರ್ಯವೇ?
ಮದುವೆ, ಪತಿ, ಸುತರೇ ಜೀವನದೈಸಿರಿಯೇ?
ಹಣ, ಒಡವೆ ಸಂಪತ್ತೆ ಬಾಳಿನಾ ಉಸಿರೇ?
ಇಲ್ಲವೆನ್ನುವ ಭಾವ ಒಮ್ಮೆ ಪಕ್ಕಕ್ಕಿಟ್ಟು
ಕಣ್ತೆರೆದೊಮ್ಮೆ ನೋಡಿದರೆ ಜಗವ
ದೊರೆಯುವುದೆಲ್ಲವೂ.
No comments:
Post a Comment