ಲೆನಿನ್ (ಇಂಗ್ಲಿಷ್ ಕವನದ ಅನುವಾದ)
ಸೋವಿಯತ್ ರಷ್ಯಾದ ಜನವರಿಯ ಚಳಿಗಾಲದಿನಾಡಿನುದ್ದಕ್ಕೂ ಮೊಳಗಿತು ದುಃಖದಾ ಘಂಟೆ
ನೋವಿನ ಕರಾಳ ರಾತ್ರಿಯಲಿ ನಾವತ್ತೆವು;
ಅವರೊ, ಚಲನೆಯಿಲ್ಲದೆ ಮಲಗಿದ್ದಾರಲ್ಲಿ,
ಮುಕ್ತಿದಾರಿದೀಪಕ ಮಹಾನ್ ಚಿರಂಜೀವಿ.
ನೋಡಲವರನು ಬಂದರು ಲಕ್ಷೋಪಾದಿಯಲಿ
ಅಶ್ರುತರ್ಪಣ ನೀಡಲು, ವಿಮುಕ್ತರಾದವರು,
ಹಳ್ಳಿ-ನಗರ, ಶಾಲೆ ಕಾರ್ಖಾನೆಗಳಿಂದ
ರಾತ್ರಿ ಹಗಲೆನ್ನದೆ, ದೋಣಿಯಲಿ, ಟ್ರೈನಿನಲಿ
ತಂಡೋಪತಂಡಗಳಲಿ ಸಮುದ್ರದ ತೆರದಿ.
ಮುಂದೂಡಲಾಯಿತು ದಹನಕ್ರಿಯೆ ಮತ್ತೆ ಮತ್ತೆ
ನೋವು - ಪ್ರೀತಿ ತುಂಬಿದ ಮನಗಳ ಆ ಸಾಲು
ಕರಗಿಲ್ಲ, ಅಂದಿನಿಂದ ಇಂದಿನವರೆಗೆ
ಸಾಗುತ್ತದದು ಮುಂಬರುವ ಯುಗಗಳಲೂ,
ಹೊತ್ತಿಸುವುದಿಲ್ಲ ಅವರ ಚಿತೆ ಯಾರೂ.
No comments:
Post a Comment