[26/03, 12:23 AM] Sudha: ಪುಟ್ಕಥೆ - ೧೨೮೦
ಅಸಹನೆಯಿಂದ ಶತಪಥ ಹಾಕುತ್ತಿದ್ದನವನು, ಮನೆಯಲ್ಲಿರಲಾಗದೆ, ಹೊರಗೆ ಹೋಗಲಾಗದೆ.
"25 ವರ್ಷಗಳು ನಾನು ಹೇಗೆ ಮನೆಯಲ್ಲಿಯೇ ಕಳೆದಿರಬಹುದೆಂಬುದನ್ನು ಊಹಿಸಿದ್ದೀರಾ?" ಕೇಳಿದಳು ಪತ್ನಿ.
ಇಡೀ ದಿನ ಮೌನವಾಗಿ ಕುಳಿತುಬಿಟ್ಟವನು ಮರುದಿನ ಬೆಳಿಗ್ಗೆ ಅವಳಿಗೆ "ಕ್ಷಮಿಸಿಬಿಡು, ನಿನ್ನ ಕನಸುಗಳಿಗೆ ಬೇಲಿ ಹಾಕಿದ್ದಕ್ಕೆ, ಬದಲಾಗುವ ಯತ್ನದಲ್ಲಿರುವೆ" ಎನ್ನುತ್ತಾ ತಾ ಮಾಡಿದ ಚಹಾ ನೀಡಿದ!!
- ಸುಧಾ ಜಿ
ಶುಭದಿನ
[27/03, 1:39 AM] Sudha: ಪುಟ್ಕಥೆ - ೧೨೮೧
"ಓದ್ಕೊಳ್ಳೊ, ಸುಮ್ನೆ ಕಾಲಹರಣ ಮಾಡ್ಬೇಡ. ಆಮೇಲೆ ಡಿಗ್ರಿನೂ ಇಲ್ಲ, ಬುದ್ಧಿನೂ ಇಲ್ಲ ಅಂತಾಗ್ಬಿಡುತ್ತೆ."
"ಅಪ್ಪ, ಡಿಗ್ರಿ ಇದ್ರೆ ಬುದ್ಧಿ ಬರುತ್ತೆ ಅಂತೇನಲ್ಲ ಬಿಡಿ. ಈಗ ನೋಡಿ ಲಾಕ್ ಡೌನ್ ಅಂದ್ರೂ ಕೂಡ ಪದವೀಧರರಾಗಿರೊ ನೀವು ಸುಮ್ಸುಮ್ನೆ ಹೊರಗೆ ಹೋಗ್ತಾ ಇದ್ದೀರ. ಹೆಚ್ಚೇನು ಓದದ ಅಜ್ಜ ತಾವೂ ಹೊರಹೋಗ್ತಿಲ್ಲ, ಬೇರೆಯವರಿಗೂ ಬುದ್ದಿ ಹೇಳ್ತಾ ಇದ್ದಾರೆ. ಈಗ್ ಹೇಳಿ ಡಿಗ್ರಿಗೂ ಬುದ್ಧಿಗೂ ಸಂಬಂಧ!"
- ಸುಧಾ ಜಿ
ಶುಭದಿನ
[28/03, 10:09 AM] Sudha: ಪುಟ್ಕಥೆ - ೧೨೮೨
"ಏನಮ್ಮ ನಿನಗೆ ಬುದ್ಧಿ ಇಲ್ಲವಾ. ಹೊರಗೆ ಬರಬೇಡಿ ಅಪಾಯ ಎಂದರೂ ಹಾಯಾಗಿ ಸುತ್ತಾಡ್ತಿದ್ದೀರಲ್ಲ?" ಜೋರಾಗಿ ಕೇಳಿದರು ಪೋಲಿಸ್ ಇನ್ಸ್ಪೆಕ್ಟರ್.
"ಅಪಾಯ ಅಂತ ಗೊತ್ತು ಅಂಕಲ್. ಆದರೆ ಇಷ್ಟು ದಿನಗಳೂ ಮನೆಯಿಂದ ಹೊರಬಂದಾಗ ಯಾರೊ ಹಿಂಬಾಲಿಸುತ್ತಿದ್ದರು, ನನ್ನ ದೇಹದ ಬಗ್ಗೆ ಕೆಟ್ಟದ್ದಾಗಿ ಮಾತಾಡುತ್ತಿದ್ದರು, ಮೈಕೈ ಸೋಕಿಸುತ್ತಿದ್ದರು. ಭಯವಾಗುತ್ತಿತ್ತು, ಮೈಮುದುರಿಕೊಂಡು ತಲೆಬಗ್ಗಿಸಿಕೊಂಡು ನಡೆಯುತ್ತಿದ್ದೆ. ಆದರಿಂದು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಯಾರ ಕಾಟವೂ ಇಲ್ಲದೆ, ಆರಾಮಾಗಿ ತಲೆ, ದೇಹವನ್ನು ಎತ್ತಿ ನಡೆಯುತ್ತಿದ್ದೇನೆ, ಒಂದೈದು ನಿಮಿಷ ಅಷ್ಟೇ, ಪ್ಲೀಸ್ ಅಂಕಲ್" ಕೇಳಿಕೊಂಡಳು.
ಆ ವ್ಯಕ್ತಿಯ ಮನ ಕಲಕಿತು. "ಆಯ್ತು ಸೇಫಾಗಿ ಮನೆಗೆ ಹೋಗು" ಮುಗುಳ್ನಗುತ್ತಾ , ಪಕ್ಕಕ್ಕೆ ಸರಿದರು!!
- ಸುಧಾ ಜಿ
ಶುಭದಿನ
[29/03, 11:13 AM] Sudha: ಪುಟ್ಕಥೆ - ೧೨೮೩
ಹಸಿವಾಗುತ್ತಿದೆ ಎಂದು ಬಂದವರಿಗೆ ಪಾತ್ರೆಗಳೊಳಗೆ ನೀಟಾಗಿ ಅನ್ನ, ಸಾರು, .......ಎಂದು ಬರೆದಿಟ್ಟ ಚೀಟಿಗಳು ಕಂಡವು.
"ನೀವೂ ಸಹ ನನಗೇನೂ ಸಹಾಯ ಮಾಡದೆ ಬರಿ ಚಪ್ಪಾಳೆ ತಟ್ಟಿ, ವಾಟ್ಸಪ್ ನಲ್ಲಿ 'ಅಡಿಗೆ ಮನೆ ಸದಾ ತೆರೆದೇ ಇಟ್ಟಿರುವ ಪತ್ನಿಗೆ, ಅಮ್ಮನಿಗೆ ಶುಭಾಶಯ' ಹೇಳುತ್ತಿದ್ದೀರ?" ಮನೆಯೊಡತಿಯ ಮಾತು.
ತಲೆ ತಗ್ಗಿಸಿದರೆಲ್ಲರೂ, ನಿಧಾನವಾಗಿ, "ಏನು ಮಾಡಬೇಕು?" ಕೇಳಿದರು!!
- ಸುಧಾ ಜಿ
ಶುಭದಿನ
(ಮನೆಯೊಡತಿಯ ಜೊತೆ ಕೆಲಸ ಹಂಚಿಕೊಳ್ಳುತ್ತಿರುವ ಎಲ್ಲಾ ಪುರುಷರಿಗೆ, ಮಕ್ಕಳಿಗೆ 🙏🏼)
[30/03, 9:29 AM] Sudha: ಪುಟ್ಕಥೆ - ೧೨೮೪
"ತನ್ನ ಅಸ್ತಿತ್ವವನ್ನು ಜನ ಮರೆಯಬಾರದೆಂದು, ಆಗಾಗ ಇಂತಹ ಸಂಕಷ್ಟಗಳನ್ನು ದೇವರು ತಂದೊಡ್ಡುತ್ತಾನೆ ಎನ್ನುತ್ತೀರ. ಈಗ ಅಣ್ಣ ಸಹ ನಿಮ್ಮ ಅಸ್ತಿತ್ವವನ್ನು ಮರೆತು ಅವನ ಪ್ರಪಂಚದಲ್ಲಿಯೇ ಮುಳುಗಿಹೋಗಿದ್ದಾನೆ. ನಿಮ್ಮ ಇರುವಿಕೆಯನ್ನು ಗುರುತಿಸಲು ನೀವು ಅವನಿಗೆ ಕೆಟ್ಟದ್ದು ಮಾಡುತ್ತೀರಾ ಅಥವಾ ಕೆಟ್ಟದ್ದಾಗಲೆಂದು ಬಯಸುತ್ತೀರಾ?" ಕೇಳಿದ ಮಗಳಿಗೆ ಏನು ಉತ್ತರ ಕೊಡಬೇಕೊ ತಿಳಿಯದಾಯಿತು ಆ ತಾಯ್ತಂದೆಯರಿಗೆ!!
- ಸುಧಾ ಜಿ
ಶುಭದಿನ
[31/03, 11:58 AM] Sudha: ಪುಟ್ಕಥೆ - ೧೨೮೫
"ಇಷ್ಟು ದಿನ ದೇಶಗಳು ಬೇರೆಬೇರೆ, ನಮ್ಮ ಮೇಲೆ ಬೇರೆಯವರು ಆಕ್ರಮಣ ಮಾಡ್ತಾರೆ ಅಂತ ಎಲ್ಲಾ ದೇಶದ ಆಡಳಿತಗಾರರು ಜನರಲ್ಲಿ ಭಯ ಹುಟ್ಟಿಸಿ, ಶಸ್ತ್ರಾಸ್ತ್ರಗಳನ್ನು ಪೇರಿಸಿದರಲ್ಲ, ಮತ್ತೆ ಈಗ ಕೊರೋನಾ ಸಮಸ್ಯೆಯಿಂದಾಗಿ ಒಬ್ಬರಿಗೊಬ್ಬರು ಎಷ್ಟು ಚೆನ್ನಾಗಿ ನೆರವಾಗುತ್ತಿದ್ದಾರೆ. ಮತ್ತೆ ಯಾವಾಗಲೂ ಇದೇ ರೀತಿ ಒಟ್ಟಿಗೆ ಬದುಕಬಹುದಲ್ಲ? ಆಗ ಶಸ್ತ್ರಾಸ್ತ್ರಗಳಿಗೆ ಖರ್ಚು ಮಾಡುವ ಹಣವನ್ನು ಶಾಲೆ, ಆರೋಗ್ಯ, ಕೃಷಿ ಇತ್ಯಾದಿಗೆ ಖರ್ಚು ಮಾಡಬಹುದಲ್ವಾ?"
ಅವಳ ಪ್ರಶ್ನೆ ಈಗ ಮನೆಯವರೆಲ್ಲರ ಪ್ರಶ್ನೆಯಾಗಿದೆ. ಅದು ದೇಶದೆಲ್ಲರ ಪ್ರಶ್ನೆಯೂ ಆಗಬಹುದಲ್ಲವೇ?!
- ಸುಧಾ ಜಿ
ಶುಭದಿನ
[01/04, 12:11 PM] Sudha: ಪುಟ್ಕಥೆ - ೧೨೮೬
ಎಲ್ಲೆಲ್ಲೂ ಗಂಡು ಮಕ್ಕಳು ಅಡಿಗೆಮನೆಯಲ್ಲಿ ಪಡಿಪಾಟಲು ಪಡುತ್ತಿರುವ ದೃಶ್ಯಗಳನ್ನು ಮೊಬೈಲ್ ಗಳಲ್ಲಿ ಕಂಡ ಹೆಣ್ಮಕ್ಕಳು ಗಂಡ್ಮಕ್ಕಳಿಗೊಂದು ಸವಾಲೊಡ್ಡಿದ್ದಾರೆ.
"ನೀವು ಹೆಣ್ಮಕ್ಕಳು, ನಿಮ್ಮ ಕೈಲಾಗದು ಎಂದ ಎಲ್ಲಾ ಕೆಲಸಗಳನ್ನು ನಾವು ಮಾಡಿ ತೋರಿಸಿದ್ದೇವೆ. ಯಾವಾಗಲೂ 'ಏನ್ಮಹಾ' ಎಂದು ನೀವು ಉಡಾಫೆ ಮಾಡುವ ಅಡಿಗೆ ಕೆಲಸವನ್ನು ನೀವೀಗ ಅಚ್ಚುಕಟ್ಟಾಗಿ ಮಾಡಿ ತೋರಿಸಿ!!"
ಗಂಡಸರು ಈ ಸವಾಲು ಸ್ವೀಕರಿಸುತ್ತಾರಾ ಎಂದು ನೋಡಲು ಹೆಣ್ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ!!
- ಸುಧಾ ಜಿ
ಶುಭದಿನ
(ಅಡಿಗೆ ಕೆಲಸವನ್ನು ಮನೆಯವರೊಂದಿಗೆ ಹಂಚಿಕೊಳ್ಳುವ ಗಂಡ್ಮಕ್ಕಳಿಗೆ 🙏🏼)
[02/04, 10:30 AM] Sudha: ಪುಟ್ಕಥೆ - ೧೨೮೭
ಇಬ್ಬರು ಸ್ನೇಹಿತರ ನಡುವೆ ಜೋರು ಚರ್ಚೆ. ಹೆಣ್ಣು ಮಕ್ಕಳಿಗೆ ಸಮಾನತೆ ಕೊಡಬೇಕೇ ಬೇಡವೇ ಎಂದು.
ಕೇಳಿಸಿಕೊಳ್ಳುತ್ತಿದ್ದ ಮಗ, "ಅಪ್ಪ ನಿನ್ನ ಎರಡು ಕಾಲುಗಳಲ್ಲಿ ಒಂದು ಉದ್ದವಿದ್ದರೆ ಏನಾಗುತ್ತೆ? ಕುಂಟ ಅನಿಸಿಕೊಳ್ತೀಯ. ಬೇಗ ನಡೆಯಲು ಆಗುವುದಿಲ್ಲ ಅಲ್ಲವೇ? ಮತ್ತೆ ಇದೂ ಹಾಗೆಯೇ ಅಲ್ಲವೇ?"
ಮಗನ ಪ್ರಶ್ನೆಗೆ, ತರ್ಕಕ್ಕೆ ಅಪ್ಪ ಗಪ್ ಚುಪ್.
"ಈಗ ಉತ್ತರ ಹೇಳಪ್ಪ!" ಚಪ್ಪಾಳೆ ತಟ್ಟಿದ ಸ್ನೇಹಿತ.
- ಸುಧಾ ಜಿ
ಶುಭದಿನ
[03/04, 9:49 AM] Sudha: ಪುಟ್ಕಥೆ - ೧೨೮೮
ಟ್ರಾಫಿಕ್ ನ ಕರ್ಕಶ ಸದ್ದಿಗೆ ಒಗ್ಗಿಹೋಗಿದ್ದ ಅವಳಿಗೆ ಪಕ್ಷಿಗಳ ಕಲರವ ಗಲಾಟೆಯೆನಿಸಿತು. ಮನೆಯೊಳಗಿಂದ ಓಡಿಸಿದರೆ ಅವು ಹೋಗುತ್ತಿಲ್ಲ, ಹೊರಗೆ ಹೋಗಲು ಲಾಕ್ ಡೌನ್ ಬಿಡುತ್ತಿಲ್ಲ. ಕ್ರಮೇಣವಾಗಿ ಅದು ಸದ್ದಲ್ಲ, ಇಂಚರ ಎನಿಸತೊಡಗಿತು,
ಇಷ್ಟು ದಿನ ಕಳೆದುಕೊಂಡಿದ್ದೇನೆಂಬುದು ತಿಳಿಯಿತು!!
- ಸುಧಾ ಜಿ
ಶುಭದಿನ
[04/04, 12:54 PM] Sudha: ಪುಟ್ಕಥೆ - ೧೨೮೯
"ದೀಪ ಯಾಕೊ, ಕ್ಯಾಂಡಲ್ ತಗೊ." ಕೊಟ್ಟ ಅಂಗಡಿಯವ.
"ದೀಪಾನೇ ಬೇಕಣ್ಣ., ಹಸಿವಿನಿಂದ ನಮ್ಮವ್ವ ಸತ್ತಾಳ, ಮನೇಲಿ ದೀಪ ಉರಿಸಬೇಕಂತೆ" ಅಳುತ್ತಾ ಹೇಳಿದ ಆ ಬಾಲಕ!!
- ಸುಧಾ ಜಿ
ಶುಭದಿನ
[05/04, 9:44 AM] Sudha: ಪುಟ್ಕಥೆ - ೧೨೯೦
"ಗುಂಡ, ಡಾಕ್ಟರ್ ಮುಖ್ಯನಾ ಅಥವಾ ಪ್ರತಿಮೆ ಮುಖ್ಯನಾ?"
"ಟೀಚರ್, ಡಾಕ್ಟರ್ರೇ."
"ಕಾರಣ ಹೇಳು."
"ಡಾಕ್ಟರ್ ನ ಪ್ರತಿಮೆ ಮಾಡಬಹುದು, ಆದರೆ ಪ್ರತಿಮೆ ಡಾಕ್ಟರ್ ಆಗಲು ಸಾಧ್ಯವೇ!!"

No comments:
Post a Comment